Heritage of Kodagu
ವಿಭಿನ್ನತೆಯಲ್ಲಿ ಅಖಂಡತೆ ಭಾರತೀಯತೆ :
ಕೊಡಗು(KODAGU) : ನಾಡಿಗೆ ಯೋಧರನ್ನು ನೀಡಿ ಕಿತ್ತಳೆ, ಕಾಫಿ ಏಲಕ್ಕಿ , ಕಾಳು ಮೆಣಸು ಮೊದಲಾದ ಪ್ರಾಯೋಗಿಕ ಬೆಳೆಗಳಿಗೆ ಪ್ರಸ್ಥ ತಾಣವಾಗಿದ್ದು ಉತ್ತಮ ಹವಾಮಾನದ ನಾಡು ಕೊಡಗು. ಸ್ವಾತಂತ್ರ್ಯ ಪೂರ್ವದ ಕೇಂದ್ರಾಡಳಿತದಲ್ಲಿ ಪುಟ್ಟ 'ಸಿ' ರಾಜ್ಯವಾಗಿದ್ದು ಬ್ರಿಟಿಷರ ಆಳ್ವಿಕೆಯ ನಡುವೆಯೂ ತನ್ನ ಸಂಸ್ಕೃತಿಯನ್ನು ಭಾರತೀಯ ಜೀವನ ಶೈಲಿಯನ್ನು ಆಚರಿಸಿಕೊಂಡು ಬಂದ ಪ್ರದೇಶ, ಬಾಶಾವಾರು ರಾಜ್ಯಗಳ ಪುನರ್ ರಚನೆಯಡಿ ಅಂದಿನ ವಿಶಾಲ ಮೈಸೂರಿನ ( ಇಂದಿನ ಕರ್ನಾಟಕ ) ಒಂದು ಜಿಲ್ಲೆಯಾಗಿ ಇಂದು ತನ್ನತನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸುಮಾರು 4109 ಚದರ ಕಿಮೀ ವಿಶಾಲ ಕ್ಷೇತ್ರವುಳ್ಳ ಈ ಜಿಲ್ಲೆ ಕೇವಲ ಎರಡು ಶಾಸಕರನ್ನು ಹೊಂದಿದ್ದು "ಮೈಸೂರು"ಲೋಕಸಭೆಯ ಭಾಗವಾಗಿದೆ.
ಕೊಡಗು ಅತಿ ವೃಷ್ಟಿ: ಸರಾಸರಿ ೧೩೦ ರಿಂದ ೧೪೦ ಇಂಚು ಮಳೆ ಇದ್ದು, ಅಂದು ಕಿತ್ತಳೆ( ಕೂರ್ಗ್ ಆರೆಂಜ್) / ಏಲಕ್ಕಿ( ಕೂರ್ಗ್ ಗ್ರೀನ್ ಕಾರ್ಡಮಮ್ )/ ಜೇನು (ಕೂರ್ಗ್ ಹನಿ ) ಕೃಷಿಗೆ ಪ್ರಸಿದ್ಧ ವಾಗಿದ್ದ ಈ ಪುಟ್ಟ ಕೊಡಗು ರಾಜ್ಯ ಇಂದು ಅತಿ ವೃಷ್ಟಿ ಯಿಂದ ತತ್ತರಿಸಿದೆ. ಹುಣಸೂರು, ಪಿರಿಯಾಪಟ್ಟ ತಾಲೂಕಿನ ಹೆಚ್ಚಿನ ಭಾಗಗಳಿಗೆ ಹೊಗೆಸೊಪ್ಪು ಬೆಳೆಯ ಒಣ ಭೂಮಿಗೆ ನೀರುಣಿಸಲು ಹಾರಂಗಿ ನದಿಗೆ ಅಡ್ಡಲಾಗಿ ಕಟ್ಟಿದ ಕಟ್ಟೆ ( ಡ್ಯಾಮ್ ), ಇಂದು ಮಾದಾಪುರ, ಹಟ್ಟಿ , ಕಾಂಡನ ಕೊಲ್ಲಿ ಮಕ್ಕಂದೂರು ಮೊದಲಾದ ಪಲವತ್ತಾದ ಕಾಫಿ ತೋಟಗಳ ಕ್ಷೇತ್ರಕ್ಕೆ ಶಾಪವಾಗಿದೆ .
2018 KODAGU DISASTER: ಕೊಡಗು ಜಿಲ್ಲಾಡಳಿತ ಸಹೃದಯಿ ಸ್ವಯಂಸೇವಕ , ಸಂಘ . ಸಂಘಟನೆಗಳ ಹಾಗೂ ರಾಷ್ಟ್ರೀಯ ವಿಪತ್ತು ಘಟಕಗಳ ಮತ್ತು ಜಿಲ್ಲಾ ವಿವಿಧ ಇಲಾಖೆಗಳ ಸಂಪೂರ್ಣ ಸಹಕಾರ /ಸಹಾಯದಿಂದ ಈ ದುರಂತ ವನ್ನು ಎದುರಿಸುವಲ್ಲಿ ಸಫಲ ವಾಗಿದೆ. ಸಂತ್ರಸ್ತರ ರಕ್ಷಣೆ, ಸಾಂತ್ವನ ಮತ್ತು ಆರೈಕೆ, ತಾತ್ಕಾಲಿಕ ವಸತಿ ಮತ್ತು ಮುಖ್ಯ ರಸ್ತೆಗಳ ಜೋಡಣೆಯ ಎರಡು ಘಟ್ಟಗಳನ್ನು ೪೦ ದಿನಗಲ್ಲಿ ಪೂರೈಸಿದೆ. ಇದಕ್ಕೆ ಅವರಿಗೆ ಅಭಿನಂದನೆಗಳು. ಮೂರನೆಯ ಹಂತ ಸಿದ್ಧತೆಯಲ್ಲಿದೆ: ತನ್ನ ಮನೆ, ಗದ್ದೆ, ತೋಟಗಳನ್ನು ಕಳೆದುಕೊಂಡು, ಕುಡಿಯುವ ನೀರಿಗಾಗಿ ಬವಣೆ ಎದುರಿಸುತ್ತಿರುವ ೧೪ ಮುಖ್ಯ ಗ್ರಾಮ ( ೩೨ ಉಪ ಗ್ರಾಮ) ಗಳ ಕಾರ್ಯ ಶೀಘ್ರ ವಾಗಿ ಜರುಗ ಬೇಕಾಗಿದೆ.
ABOUT KODAGU: ಕೊಡಗು ಜಿಲ್ಲೆಯು ಶೇಕಡಾ ೯೮ ರಷ್ಟು ಸುಶಿಕ್ಷಿತರಾಗಿದ್ದು, ಇಂದು ಅವರ ಕೌಶಲ್ಯಾಭಿವೃದ್ದಿಗೆ ಅವಕಾಶ ಕಲ್ಪಿಸಿ, ತನ್ನ ಕೃಷಿ ಭೂಮಿಯನ್ನು ಕಳೆದು ಕೊಂಡು ಬಾಳಿಗೆ ಪರ್ಯಾಯ ವ್ಯವಸ್ಥೆಯನ್ನು ಹುಡುಕುತ್ತಿರುವ ಕುಟುಂಬಗಳಿಗೆ ದಾರಿ ದೀಪದ ಸಂಸ್ಥೆಯ ಅಗತ್ಯವಿದೆ. ಇನ್ಸ್ಟಿಟ್ಯೂಷನ್ ಒಫ್ ಇಂಜಿನೀರ್ಸ್ ( ಇಂ ) ದಂತಹ ಸಂಸ್ಥೆಯ ಘಟಕದ ಅಗತ್ಯವಿದೆ. ಶೇಕಡಾ ೭೦ ರಷ್ಟು ಅರಣ್ಯ ಭೂಮಿ ಇದ್ದು, ಉಳಿದ ಭಾಗದ ಹೆಚ್ಚಿನಂಶ ಕಾಫಿ ತೋಟಗಳಿಂದ ಆವರಿಸಲ್ಪಟ್ಟ ಕೊಡಗು ತನ್ನ ದಿನ ನಿತ್ಯದ ಎಲ್ಲ ಅಗತ್ಯ ವಸ್ತುಗಳಿಗೆ ನೆರೆ ಜಿಲ್ಲೆಯನ್ನು ಅವಲಂಬಿಸಿದೆ.
ಇಂದು ಕೊಡಗು ಪಂಚ ತಾರಾ ಹೋಟೆಲ್ ಮತ್ತು ರೆಸಾರ್ಟ್ಗಳ ಬೀಡಾಗಿದೆ. ಪುಟ್ಟ ಪಟ್ಟಣ ಪಂಚಾಯ್ತ್ ಆಗಿದ್ದ ಮಡಿಕೇರಿ, ನಗರ ಸಭೆಯಾಗಿ ಸುತ್ತಲಿನ ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕರ್ಣಂಗೇರಿ ಸುತ್ತಲಿನ ಕೃಷಿ ಆಧಾರಿತ ಮುಗ್ದ ಗ್ರಾಮಗಳನ್ನು ತನ್ನ ತೆಕ್ಕೆಯಲ್ಲಿ ಸೇರಿಸಿ ವರ್ತುಲ ರಸ್ತೆಯ ಯೋಜನೆಯಡಿ ಮಹಾನಗರ ಪಾಲಿಕೆಯಾಗುವ ಯೋಜನೆಯನ್ನು ಹಾಕಿಕೊಂಡಿದೆ ಯೋಜನಾ ವಿಭಾಗ . ಮಂಗಳೂರು, ಮೈಸೂರು ಮದ್ಯದ ಈ ಪುಟ್ಟ ಜಿಲ್ಲಾ ಕೇಂದ್ರ ಮುಂದೆ ಆ ನಗರಗಳಿಗೆ ಸವಾಲಾಗುವ ಕನಸ ಕಂಡಿದೆ.
HERITAGE: ಶಿಲಾಯುಗ ದಿಂದ ಕಂಪ್ಯೂಟರ್ ಯುಗದ ವರೆಗೆ ನಡೆದು ಬಂದ ಹಾದಿಯನು ಒಮ್ಮೆ ತಿರುಗಿ ನೋಡಿದಾಗ- ವಿಶ್ವದ ವಿವಿಧ ಜನಾಂಗಗಳಿಗೆ ಆಶ್ರಯ ನೀಡುತ ಬೆಳೆದು ನಿಂತಿದೆ ಧರ್ಮ ಸಹಿಷ್ಣುಗಳ ಬೀಡು.ಶೂನ್ಯದಿಂದ ಅನಂತತೆಯೆಡೆಗೆ ಅನ್ವೇಷಿಸುತ್ತಾ ಆವಿಷ್ಕರಿಸುತ ವಿಶ್ವದೆಲ್ಲೆಡೆ ತನ್ನ ವೇದಾಂತ ಸಾರವ ಪಸರಿಸುತ್ತಾ ಬೃಹತ್ ಜನ ಸಂಖ್ಯೆ ಯೊಡನೆ ಬಡತನವನ್ನು ಎದುರಿಸುತ ಶ್ರೀಮಂತಿಕೆಯನು ಪ್ರದರ್ಶಿಸುತಿದೆ, ನಮ್ಮೆಲ್ಲರ ಭಾರತ - ಅಖಂಡ ಭಾರತ. ಕೊಡಗು ಅಗಸ್ತ್ಯ, ವಸಿಷ್ಠ ರಾದಿ ಯಾಗಿ ಋಷಿ ವರ್ಯರು ನೆಲೆಸಿದ ಪುಣ್ಯ ಭೂಮಿಯಿದು.ವ್ಯಾಸ, ವಾಲ್ಮೀಕಿ, ಬಸವಣ್ಣ, ಪುರಂದರ, ಕನಕದಾಸ ರಾದಿ ಯಾಗಿ ಕಾವ್ಯ- ವಚನಗಳ ರಚಿಸಿ ಹಾಡಿದ ನಾಡಿದು.
ವಿಶ್ವಕ್ಕೆ ಭೋದಿಸುತ : ಚಾಣಕ್ಯ - ಕೌಟಿಲ್ಯ ರಾಜ ನೀತಿ ಅರ್ಥ ನೀತಿ ಗಳ ವಿಶ್ವಕ್ಕೆ ಭೋದಿಸುತ ತಕ್ಷಶಿಲೆ , ನಳಂದ ವಿಶ್ವ ವಿದ್ಯಾಲಯ ದಡಿ ವಿಶ್ವಕ್ಕೆ ಜ್ಞಾನವ ಪಸರಿಸಿದ ವಿಶ್ವ ಗುರು ಕುಲ ಭಾರತ. ಇಂದು ಆಯುರ್ವೇದ , ಯೋಗ ವಿದ್ಯೆ, ನೃತ್ಯ , ಸಂಗೀತ , ಯಕ್ಷ ಕಲೆಯ ತವರೂರು ಭಾರತ. ಬುದ್ಧ , ಮಹಾವೀರ, ಶಂಕರ, ಮದ್ವ, ರಾಮಾನುಜ , ಗುರುನಾನಕ, ಬಸವಣ್ಣ, ಶ್ರೀ ರಾಮಕೃಷ್ಣ ಪರಮಹಂಸ , ವಿವೇಕಾನಂದ , ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ ಮೊದಲಾದ ಮತ ಸ್ಥಾಪಕರು/ ಸುಧಾರಕರು ಜನಿಸಿ ವಿಶ್ವದೆಲ್ಲೆಡೆ ಭಾರತೀಯ ಸಂಸ್ಕೃತಿ, ಕಲೆ , ವಿಜ್ಞಾನ ,ವೇದಾಂತವ ಹರಡಿಸಿದ ದೇಶವಿದು. ಆರ್ಯಭಟ , ಚರಕ , ಶುಶ್ರುತ ರ ನಾಡು ನಮ್ಮದು. ಇಂದು ಸರ್ ಸಿ ವಿ ರಾಮನ್, ನರಳಿಕರ್, ವಿಕ್ರಂ ಸಾರಾಭಾಯಿ, ಧವನ್, ಅಬ್ದುಲ್ ಕಲಂ , ಯು ಆರ್ ರಾವ್ , ಸಿ ಎನ್ ಆರ್ ರಾವ್ ರಂತಹ ವಿಜ್ಞಾನಿಗಳುಳ್ಳ ವಿಶಾಲ ಹೃದಯಿ ದೇಶ ನಮ್ಮದು.
ಭಾರತೀಯ ರೈಲು , ಭಾರತೀಯ ವಿಮಾನ , ಭಾರತೀಯ ನೌಕೆ/ ಸೈನ್ಯ/ ವಾಯು ದಳ / ಗಡಿ ರಕ್ಷಣೆ ದಳ , ಭಾರತೀಯ ವಿದ್ಯುತ್- ಜಾಲ, ವಿಶ್ವ ವಿದ್ಯಾಲಯ, ವಿಜ್ಞಾನ ಸಂಸ್ಥೆಗಳು , ರಾಷ್ಟ್ರೀಯ ನವರತ್ನ ಸಂಸ್ಥೆಗಳು ಭಾರತದ ಅಖಂಡತೆಯನು ರಕ್ಸಿಸುತ,ಬೆಳೆಸುತ, ಭಾರತೀಯತೆಯ ಕೀರ್ತಿ ಪತಾಕೆಯನ್ನು ಎತ್ತಿ ನಿಂತಿರು ವುದು.
Kilar Rathanbabu/ 9448720722, ratankilar@gmail.com.
.


0 Comments:
Post a Comment
Subscribe to Post Comments [Atom]
<< Home