Tuesday, 2 November 2021

Mysore State legacy

MYSORE KINGS Contribution  ಮೈಸೂರು ಮಹಾರಾಜರ ಕೃಪೆ. ಅವರ ದೂರ ದೃಷ್ಟಿ. ೧೯೧೭ ರಲ್ಲಿ ಸ್ಥಾಪನೆಯಾದ ರಾಜ್ಯದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಹಂತ ಹಂತವಾಗಿ ಬೆಳೆದು ಇಂದು ಪ್ರತಿ ವರ್ಷ ಏಳು ವಿವಿಧ ಕ್ಷೇತ್ರಗಲ್ಲಿ ೫೦೦ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಂಜಿನೀಯರ್ಗಳನ್ನು ದೇಶಕ್ಕೆ ನೀಡುತ್ತಿದೆ. ಬಾಹ್ಯಾಕಾಶ, ಭಾರತೀಯ ಸೇನೆ, ರಾಷ್ಟ್ರ ಹೆದ್ದಾರಿ, ನೀರಾವರಿ, ವಿದ್ಯುತ್ ಯೋಜನೆ ಮೊದಲಾದ ರಾಷ್ಟ್ರೀಯ ಯೋಜನೆಗಳಲಿ ಇವರು ಸೇವೆ ಮಾಡಿ ಮಾತೃ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ೨೦೧೭ ರಲ್ಲಿ ಶತಮಾನ ಪೂರೈಸಿದ ವಿದ್ಯಾಪೀಠ ಇಂದು ಎರಡನೇ ಶತಮಾನದಲ್ಲಿ ಮೇಲ್ದರ್ಜೆಗೆ ಏರಿ ರಾಷ್ಟ್ರ ಮಟ್ಟದ ಶ್ರೇಷ್ಠ ಸಂಸ್ಥೆ ಆಗುತ್ತಿರುವುದು ಹೆಮ್ಮೆಯ ವಿಷಯ.

PAST & PRESENT ಕೊಡಗು , ದಕ್ಸಿಣ ಕನ್ನಡ, ಮೈಸೂರು, ಮಂಡ್ಯ ,ಶಿವಮೊಗ್ಗ, ಮಲ್ನಾಡು, ಚಿತ್ರದುರ್ಗ,ಬಳ್ಳಾರಿ ,ಕೋಲಾರದ ವೀರರು ಆರು ದಶಕಗಳ ಹಿಂದೆ ಒಂದೆಡೆ ಸೇರಿ ಜಾತಿ,ಮತ,ಬಾಶೆ ಅಂತಸ್ತು ಗಳ ಬೇದವಿಲ್ಲದೆ "ಬೈ ಟೂ ಕಾಫಿ, ಬೈ ಟೂ ದೋಸೆ , ಕಡ್ಲೆ ಪುರಿ ಮಂಡಕ್ಕಿ" ತಿಂದು ನೀರು ಕುಡಿತಾ ಇದ್ದ ಕಾಲವನ್ನು ನೆನಿಸಿಕೊಂಡು ಕಳೆಯುತ್ತಾ ಇದ್ದ ಮಧುರ ಸ್ಮೃತಿಗಳು ಒಂದೊಂದಾಗಿ ಮನ ಪಟಲ ದಲ್ಲಿ ಹಾದು ಹೋಗುತ್ತಿವೆ.೧೯೫೮-೬೪ ದಶಕ- ಕೇವಲ ಲಕ್ಷ ಜನ ಸಂಖ್ಯೆಯ ಬೆಂಗಳೂರು, ಅದಾಗಿತ್ತು ನಮ್ಮದು ಸುಮಾರು ಆರು ದಶಕಗಳ ಹಿಂದೆ. ೧೯೬೩, ೧೯೬೪, ೧೯೬೫ ರಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಅನೇಕರು, ಬೆಂಗಳೂರಿನ ಟಾಟಾ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿ ಅಮೆರಿಕಾ ದೇಶದ ಪ್ರಜೆ ಯಾಗಿರುವರು. ಅಮೆರಿಕಾದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳ ಪ್ರಾದ್ಯಾಪಕರಾಗಿ , ನಾಸಾ ದಂತಹ ಬಾಹ್ಯಾಕಾಶ ಸೇವೆ ಸಲ್ಲಿಸಿ ಅಮೆರಿಕಾದ ಪ್ರಗತಿಯಲ್ಲಿ ಭಾಗಿಗಳಾಗಿರುವರು.ಇಂದು ಸುಮಾರು ಒಂದು ಕೋಟಿಗೂ ಮೀರಿ ಜನ ಸಂಖ್ಯೆ ಇದ್ದು , ಸುತ್ತಲಿನ ಗ್ರಾಮಾಂತರ ಪ್ರದೇಶಗಳನ್ನೂ ತನ್ನ ತೆಕ್ಕೆಯಲ್ಲಿ ಸೇರಿಸಿಕೊಂಡು ವಿವಿಧ ಸಂಸ್ಕೃತಿ, ಭಾಷೆಗಳ ವೈವಿಧ್ಯತೆಯ ಪ್ರತ್ಯೇಕ ಸ್ವಾಯತ್ತ ಮಾಯಾ ನಗರಿಯಾಗಿದೆ ನಮ್ಮ ನಿಮ್ಮೆಲ್ಲರ ಬೃಹತ್ ಬೆಂಗಳೂರು, ಮಂಗಳ ಯಾನದ ಯುಗದಲಿ. ಎಲ್ಲಾ ಸವಲತ್ತು ,ಐಶ್ವರ್ಯ, ಐಭೋಗಗಳ ನಡುವೆಯೂ ನೆಮ್ಮದಿ ಇಲ್ಲದಂತಾಗಿದೆ. ನವ ಆಧುನಿಕತೆಯ ಮರೀಚಿಕೆಯ ಬೆನ್ನಟ್ಟುತ್ತಲಿರುವ ಯುವ ವೃಂದಕೆ.

Many from our batch continued their Masters and Doctorate in Indian Institute of Science, Indian Institute of Technology and other premier Technological Institutions which are listed in Top Hundred Institutes of National Importance of INDIA. These Alumnus scholars worked as Faculty in Premier Institutions across Globe and Few have settled in USA, Germany, Australia, Canada,( In home Country India- Delhi, Mumbai, Vadodara, Indore, Chennai, Madhurai), Singapore and other places. Even today they are keeping connections with their Alma mater and visit College & Hostel when they visit Bangalore. 

UVCE ALUMNI India & State of Karnataka remembers the contribution of many senior Alumni of 1957-61 batch like Dr S Ramegowda, Former Chairman of AICTE, Dr Sheshagiri, Director NIC, MK Janardhan ( Japro Group) and many others who had lot of attachment and dreams about their Alma Mater. We miss these guiding lights today in showing us the path to glory. Their support will be always be there to the Present Torch bearers and members of Task Force and Committee and Higher-Education-Department. All our Learned Academicians settled in different parts of India and Globe need to join this crusade. Many have served as Chair and Deans in renowned Universities in USA, UK, Europe,IISc Bangalore and IIT,s of INDIA , NIT,s and Reputed Private Engineering Colleges and Polytechnics. Large band of Alumni have worked in Senior Management of Public Sector Undertakings, Central & State Public Sector undertakings, Electricity Boards and other Corporate Houses in State and Central Government Departments and earned name & Fame.

UVCE Contribution to Entertainment World: Our alma mater has produced many great Cine and Stage Artists( Celebrities) like Wing Commander H G Dattatreya, Sri Ramesh Aravind, Prakash Belawadi, Manomurthy, and others in the field of Acting. Directing, Music and Fine Arts.

Padma Awardees: Drs M R Srinivasan, Roddam Narasimha, Vasudeva Aatre, MR Prahlad, M R Nataraj are with UVCEGA in the sacred work of renovation and restructuring.

Armed Forces & Science & Technology Field: College of Engineering, Bangalore Mysuru State's First Government Engineering College established in 1917 has played a great role in Indian Armed Forces, particularly in Core of Engineers, EME, Signals, Air Force, Navy and Border Road Services, DRDO, ISRO , HAL, BEL, ITI, LRDE, ADE, NAL and Great R&D Institutions, in last century and their names are etched in golden letters of Indian History.

Appeal to all our Alumnus- COVID HEALTH CARE: Let us and our kins and friends strictly follow the Health guide lines issued by the Government and Local body. Join the crusade in fighting the epidemic.

ವಿಶ್ವದೆಲ್ಲೆಡೆ ಇಂದು ಕೊರೊನ ಎಂಬ ಪಿಡುಗಿನ ಮಹಾ ಮಾರಿ ಹರಡಿದೆ. ಇನ್ನಷ್ಟು ಜನಕ್ಕೆ ಸೋಂಕು ತಗುಲದಂತೆ ವಿಶ್ವ ಪ್ರಜೆಗಳೆಲ್ಲರೂ ಕಟ್ಟೆಚ್ಚರ ವಹಿಸಬೇಕಾಗಿದೆ.ಪಕ್ಕದ ಮನೆಗೆ ಅಥವಾ ಬಣವೆಗೆ ತಗುಲಿದ ಬೆಂಕಿ ನಮ್ಮ ಮನೆಗೆ ತಗುಲದಿರುವುದೇ. ಕೇವಲ ಬೆರೆಳೆಣಿಕೆಯಷ್ಟು ಅಲ್ಲೊಂದು ಇಲ್ಲೊಂದು ಎಂದು ಕಡೆಗಣಿಸುವಂತಿಲ್ಲ. ಪ್ರತಿ ಒಬ್ಬರೂ ನಮ್ಮ ಆಹಾರ ಹಾಗೂ ಸ್ವ ಶುಚಿ ಹಾಗೂ ಪರಿಸರ ಶುಚಿಯ ಬಗ್ಗೆ ಆದ್ಯ ಗಮನ ನೀಡಬೇಕಾಗಿದೆ. ಶುಚಿ ಎಂಬ ಶಬ್ದ ಭಾರತೀಯ ಸಂಸ್ಕೃತಿಯ ತಳಪಾಯ. ದೇವ ದೇವಾಲಯಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲ ಬಲ್ಲದು. ಹಿಂದೂ,ಮುಸಲ್ಮಾನ್, ಪಾರಸಿ,ಸಿಖ್ ಮೊದಲಾದ ಭಾರತದ ಎಲ್ಲ ಮತ ಗಳ ಸಂಪ್ರದಾಯಗಳಲ್ಲಿ . ಸ್ನಾನ ಸಂಧ್ಯಾದಿಗಳನ್ನ ಮಾಡಿ ಕಾಯ ವಾಚಾ ಮನಸಾ ಶುಚಿರ್ಭೂತನಾಗಿ ನಸುಕಿನಲ್ಲಿ ( ಉಷಾಕಾಲದಿ) ಕೈಕಂರ್ಯಕ್ಕಾಗಿ ಗರ್ಭ ಗುಡಿಯನು ಸ್ವಚ್ಛಗೊಳಿಸಿ, ಉತ್ಸವ ಮೂರ್ತಿ , ಆರಾಧ್ಯ ವಿಗ್ರಹವನ್ನು ಅಭಿಷೇಕದಿ ಶಾಸ್ತ್ರೋಕ್ತವಾಗಿ ಸ್ವಚ್ಛಗೊಳಿಸಿ ಅಲಂಕರಿಸಿ ಮೃತ್ತಿಕಾದಿಗಳಿಂದ ಜೀವ ಕಳೆ ತುಂಬಿ ಪೂಜಾ ವಿಧಿಗಳನ್ನು ಪ್ರಾರಂಭಿಸುವ ಕ್ರಮ ಶತಮಾನಗಳಿಂದ ನಡೆದು ಬಂದಿದೆ. ಒಳಾಂಗಣ , ಹೊರಾಂಗಣ ಮತ್ತು ವಠಾರ ಗಳನ್ನೂ ವಿವಿಧ ವರ್ಗದ ಸೇವಾ ನಿಯುಕ್ತರು ಶಿಸ್ತಿನಿಂದ ನೆರವೇರಿಸುತ್ತಾ , ಕನ್ಯಾಕುಮಾರಿ ಯಿಂದ ಬದರಿ ಕೇದಾರ ನಾಥದವರೆಗೆ ಎಲ್ಲ ದೇವಾಲಯಗಲ್ಲಿ ನಡೆಯುವ ಪ್ರಥಮ ಕೈಂಕರ್ಯವೇ ಶುಚಿ. ಭಾರತದ ಸರಕಾರದ    ದ್ಯೇಯ  ವಾಕ್ಯ " ಶುಚಿ  - ಸ್ವಚ್ಛತಾ ಆಂದೋಲನಅಭಿಯಾನ ” . ಇಂದು ರಾಜ್ಯದಾದ್ಯಂತ ನಾವು ಪಾಲಿಸಬೇಕಾದ ಆರೋಗ್ಯ ರಕ್ಷಣೆಯ ಬಗ್ಗೆ ನಾವೆಲ್ಲ ಕೈ ಗೂಡಿಸೋಣ. ನೆರೆಯವರಿಗೆ ಮಾಹಿತಿ ನೀಡುತ್ತಾ ಸಹಕರಿಸೋಣ. 

Global warming- Our contribution & role: ಇರೋ ಬರೋ ಕೆರೆ ಕುಂಟೆಗಳನ್ನೆಲ್ಲ ಮುಚ್ಚುತಾ ಹೊಸ ನಗರ ಸೃಷ್ಟಿಯಲ್ಲಿ ಸುತ್ತೂ ಇರುವ ಬೆಟ್ಟದಲ್ಲಿ ಮೇಘ ಸ್ಫೋಟ ಆಗಿ ಜೋರಾಗಿ ಮುಸಲ ಧಾರೆಯಲಿ ಅಪಾರ ಜಲಸ್ತೋಮದ ಶೇಖರಣೆಯ ಪರ್ಯಾಯ ವ್ಯವಸ್ತೇ ಯಿಲ್ಲದೆ ಬವಣೆಯಲಿ ನಗರದ ತಗ್ಗು ಪ್ರದೇಶದಿ ಮಣ್ಣು ಮುಚ್ಚಿ ಸೃಷ್ಟಿಸಿದ ಹೊಸ ಬಡಾವಣೆಗಳ ಸ್ಥಿತಿ ಮಳೆಗಾಲದಿ ತೀರಾ ಕೆಟ್ಟದಾಗಿ ನರಕ ಸದೃಶ ವಾಗುತ್ತಲಿದೆ . ವಿದ್ಯುತ್ ಕುಡಿಯುವ ನೀರು ಒಳ ಚರಂಡಿ ಮಳೆ ನೀರ ಹರಿವು ಎಲ್ಲ ಅಸ್ತವ್ಯಸ್ತ ಪ್ಲೇಗು, ಕರೋನ, ವಿಷಮ ಜ್ವರ, ಉಸಿರಾಟದ ತೊಂದರೆಗಳಿಗೆ ಆಹ್ವಾನ ನೀಡುತ್ತಿದೆ.ನಮ್ಮೀ ಬೆಳವಣಿಗೆಯ ಚಿಂತನೆ ನಾಗರಿಕ ಬದುಕಿನ ನವ ಪರಂಪರೆ. ದಿನೇ ದಿನೇ ಸುದ್ದಿ ಮಾಧ್ಯಮಗಳು ಕಲುಷಿತ ವಾತಾವರಣದ ಬಗ್ಗೆ ಎಚ್ಚರಿಸುತ್ತಿವೆ.
Health Awareness : ರಸ್ತೆ ಬದಿಯಲ್ಲಿ ತೆರೆದ ಅಂಗಡಿಗಳಲ್ಲಿ ತಿನ್ನುವ ಅಭ್ಯಾಸಗಳನ್ನು ಬಹಿಷ್ಕರಿಸೋಣ. ನಮ್ಮ ಮನೆ, ಪರಿಸರಗಳನ್ನು ಸ್ವಚ್ಛ ವಾಗಿತ್ತು ಕೊಳ್ಳೋಣ. ಬೆಚ್ಚನೆಯ ನೀರು ಕುಡಿಯುತ್ತ ಸೂರ್ಯ ರಶ್ಮಿಗೆ ಮೈ ಒಡ್ಡುತ್ತಾ ಬೆಚ್ಚಗಿರೋಣ.ಸುಧಾ ಮೂರ್ತಿ, ಡಾ ದೇವಿ ಪ್ರಸಾದ್ ಶೆಟ್ಟಿ ಮೊದಲಾದ ಸಹೃದಯಿಗಳು ನೀಡಿದ ಕರೆಗೆ ಸಹಕರಿಸೋಣ


( Case study of present day Engineering Graduate passing with High merit and academic records)

ಭಾರತೀಯ ಯುವ ಪೀಳಿಗೆಯ ಒಂದು ಇಣಕು ನೋಟ:

ರಾಜ್ಯದಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ತಾಂತ್ರಿಕ ಕಾಲೇಜುಗಳಿವೆ. ಬೆಂಗಳೂರು ನಗರದಲ್ಲಿ ೨೦ ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳಿವೆ. ಪ್ರತಿ ವಿದ್ಯಾರ್ಥಿಯೂ ಆರು ವರ್ಷಗಳ ಕಾಲ ಓದಿ ಸಾಧನೆಗೈದು ಪದವೀಧರನಾಗಿ ಉತ್ತಮ ಉದ್ಯೋಗಕ್ಕಾಗಿ ಕವಲು ದಾರಿಯಲ್ಲಿ ನಿಂದಿಹನು. ಶ್ರೀ ಒಬ್ಬ ಕಂಪ್ಯೂಟರ್ ಇಂಜಿನಿಯರ್, ರಾಜ್ಯದ ಶ್ರೇಷ್ಠ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೊದಲನೆಯ ಸ್ಥಾನದಲ್ಲಿರುವ ವಿದ್ಯಾಸಂಸ್ಥೆ ಯಲ್ಲಿ 4 ವರ್ಷಗಳ ಅಧ್ಯಯನ. ಪೂರ್ವ ತಯಾರಿಯಲ್ಲಿ ವರ್ಷಗಳ ಕಾಲಪದವಿ ಪೂರ್ವ ಅಧ್ಯಯನ ಸಿ ಟಿ , ಐಐಟಿ, ಮೊದಲಾದ ರಾಷ್ಟ್ರೀಯ ಕಾಲೇಜುಗಳ ಪ್ರವೇಶ ಪರೀಕ್ಷೆಗೆ ತಯಾರಿಯೊಡನೆ . ಕಾಲೇಜ್ ನಲ್ಲಿ ಓದುತ್ತಿರುವಾಗಲೇ ವಿವಿಧ ಕ್ಷೇತ್ರದಲ್ಲಿ ಸೇವೆ ಹಾಗೂ ಔದ್ಯೋಗಿಕ ಕ್ಷೇತ್ರದ ಸವಾಲಿನ ಪರಿಚಯ. ಜಾವಾ, ಸಿ , ಸಿ ++, ಒರಾಕಲ್, sap ಮೊದಲಾದ ಅಸ್ತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ಸೇರಿಸುತ್ತ ಉದ್ಯೋಗ ಭೇಟೆ. ಮತ್ತೆರಡು ವರ್ಷ ಎಂ ಎನ್ ಸಿ/ ಹಾಗೂ ಇತರ ಅಣಬೆ ಕಂಪೆನಿಗಳಲ್ಲಿ ಕೆಲಸ. ಕಂಪನಿ ಯಲ್ಲಿ ಸಾಫ್ಟ್ವೇರ್ ಪ್ರೋಗ್ರಾಮರ್, ಹಾಗೂ ಇತರ ಹೊಸ ಶಭ್ದ ಗಳ ಹುದ್ದೆ ಯಲಿ ಕಾರ್ಯ ನಿರ್ವಹಣೆ . ಇಷ್ಟಾದರೂ ಗೃಹಸ್ತಾಶ್ರ ಮಕ್ಕೆ ಕಾಲಿಡುವ ಮುನ್ನ ಮುಂದೇನು? ಮುಗಿಲಿಗೆ ಮುಟ್ಟಲು ಸ್ವರ್ಣ ಸೋಪಾನಕ್ಕೆ ಯಾವ ದಾರಿ, ಎಷ್ಟು ಮೆಟ್ಟಿಲು ಏರ ಬೇಕು ಎಂಬ ಪ್ರಶ್ನೆಗಳು ಅವರ ಮನದಲ್ಲಿ. ಸುಮಾರು ೨೪ ರಿಂದ - ೨೮/೨೯ವರ್ಷಗಳ ವರೆಗೆ ಹೀಗೆ ಉತ್ತಮ ಅವಕಾಶಕ್ಕಾಗಿ ಅಲೆದಾಟ.ಹೆಚ್ಚಿನವರು ನಮ್ಮ ರಾಜ್ಯದಲ್ಲಿ ಜನಿಸಿ ಆಧುನಿಕ ಭಾರತದ ವಿವಿಧ ಸಂಸ್ಕೃತಿಯ ಅರಿವು, ಭಾಷೆಗಳ ಪರಿಚಯ ಜೀವನ ಶೈಲಿಯ ಸಾಮೀಪ್ಯ ವುಳ್ಳವರು. ಕೇಂದ್ರೀಯ ಸರಕಾರ ಹಾಗೂ ಮಿಲಿಟರಿ, ರೈಲ್ವೆ , ಅಂಚೆ ಇಲಾಖೆ ಮೊದಲಾದ ಇಲಾಖೆಯಲ್ಲಿ ಸೇವೆಯಲ್ಲಿ ರುವವರ ಮಕ್ಕಳು ಉನ್ನತ ವಿಧ್ಯೆಯೊಡನೆ ವಿವಿಧ ಕ್ಷೇತ್ರಗಳಲ್ಲೂ ಪರಿಣಿತರಾಗಿರುವರು. . ಶ್ರೇಷ್ಠ ಅಧ್ಯಯನ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಅವಕಾಶ ಹಾಗೂ ಹೊರ ಪ್ರಪಂಚದ ಅರಿವು ಮೂಡಿಸುತಿದೆ. ಸ್ಪರ್ದಾತ್ಮಕ ನಿಲುವು ಹಾಗೂ ವಿಶೇಷ ತಾಲೀಮು ಭವ ಸಾಗರವ ದಾಟಲು ಬೇಕಾದ ಅಸ್ತ್ರ ಅವರಿಗೆ. ಮೂಲತಃ ಕನ್ನಡಿಗರಾದ ಇವರಲ್ಲಿ ತನ್ನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪರಿಣಿತಿಯನ್ನು ಪಡೆಯ ಬೇಕೆಂಬ ಗುರಿಯಿದೆ, ಛಲವಿದೆ, ಆಸ್ಥೆ ಇದೆ.

Role of Kannadigas in Software World: ಈಗಾಗಲೇ ತಾಂತ್ರಿಕ ಕ್ಷೇತ್ರದಲ್ಲಿ ಹೆಸರು ಮಾಡಿ ವಿಶ್ವದಲ್ಲಿ ಹೆಸರು ಮಾಡಿರುವ ಬಿ ಎಂ , ಇನ್ಫೋಸಿಸ್, ಗೂಗಲ್ , ಮೈಕ್ರೋ ಸಾಫ್ಟ್, ಒರಾಕಲ್, ಗೋಲ್ಡ್ ಮನ್ ಸಾಕ್ಸ್ ,TCS, SAP, ವಿಪ್ರೋ ಮೊದಲಾದ ಕಂಪನಿಗಳ ಮುಂಚೂಣಿಯಲ್ಲಿರುವ ಅನೇಕ ಭಾರತೀಯರು ಅದರಲ್ಲೂ ಕನ್ನಡಿಗರು ಅವರ ರೋಲ್ ಮಾಡೆಲ್ಗಳು . "ಟೋಫೆಲ್ , ಜಿ ಆರ್ " ಮೊದಲಾದ ಅರ್ಹತಾ ಪರೀಕ್ಷೆ ಗಳನ್ನು ಉತ್ತಮ ಶ್ರೇಣಿಯ ಅಂಕಗಳೊಡನೆ ಉತ್ತೀರ್ಣರಾಗುತ್ತಾ ಅಮೆರಿಕಾ ಖಂಡದತ್ತ ಹೆಚ್ಚಿನ ವ್ಯಾಸಂಗ ಹಾಗೂ ಪರಿಣಿತಿಯ ಬಗ್ಗೆ ಯೋಜಿಸಿರುವ ಹೆಚ್ಚಿನ ಸಂಖ್ಯೆಯ ಯುವ ವೃಂದದತ್ತ ಭಾರತ ಸರಕಾರ ಗಮನ ಹರಿಸ ಬೇಕಾಗಿದೆ. ಕೆನೆ ಪದರದ ಶ್ರೇಷ್ಠ ವಿದ್ಯಾರ್ಥಿಗಳನ್ನ ನಮ್ಮ ದೇಶದಲ್ಲಿಯೇ ಉಳಿಸಿಕೊಳ್ಳುವ ಕಾರ್ಯ ಆಗ ಬೇಕಾಗಿದೆ.

Retaining the Heritage : ಜೋದ್ ಪುರ , ಮೈಸೂರು, ಹೈದ್ರಾಬಾದ್ , ಜಯಪುರ ಉದಯಪುರ ಮೊದಲಾದೆಡೆ ರಾಜ ವಂಶಸ್ಥರು ಮತ್ತು ರಾಜ್ಯ ಸರಕಾರಗಳು ಹಿಂದಿನ ರಾಜ ಪರಂಪರೆಯ ಸೊತ್ತು ಚರಿತ್ರೆಯ ಕುರುಹನ್ನು ಕಾಪಾಡಿಕೊಂಡು ಬಂದಿದೆ. ಆದರೆ ದುರ್ವಿಧಿ- 1600 ರಿಂದ 1834 ರವರೆಗೆ ಕೊಡಗನ್ನು ಆಳಿದ ರಾಜ ಪರಂಪರೆಗಳ ಯಾವ ಕುರುಹನ್ನು ಬಿಡದೆ ಅವರ ಎಲ್ಲಾ ಐಶ್ವರ್ಯದೊಂದಿಗೆ ರಾಜ ಹಾಗೂ ಅವರ ಸಂತತಿಯನ್ನು ಸೆರೆಯಾಗಿ ಲಂಡನ್ಗೆ ೧೯೮೪ರಲ್ಲಿ ಕರೆದೊಯ್ದದ್ದು, ಕೊಡಗು ರಾಜ್ಯದ ಕುರುಹು ಭಾರತದ ಭೂಪಟದಲ್ಲಿ ಅಳಿಸಲು ಕಾರಣವಾಯಿತು. ಅವರಂತೆ ಅನೇಕರನ್ನು ಮತಾಂತರ ಗೊಳಿಸಿ ಭಾರತೀಯ ಹಾಗೂ ಕೊಡಗು ಸಂಸ್ಕೃತಿಯನ್ನು ಅಳಿಸಿತು ಅಂದಿನ ಬ್ರಿಟಿಷ್ ಪರಾಡಳಿತ. ತಮ್ಮ ಸ್ವಾರ್ಥಕ್ಕಾಗಿ ನಿತ್ಯ ಹಸಿರಿನ ಹರಿದ್ವರ್ಣ ಅರಣ್ಯಗಳನ್ನು ಬರಿದಾಗಿಸಿ ರಬ್ಬರ್ , ಕಾಫಿ, ಟೀ ಪ್ಲಾಂಟೇಷನ್ ಗಳನ್ನ ನಿರ್ಮಾಣ ಮಾಡಿ ಜಿಲ್ಲೆಯ ಅಂದಿನ ಆಡಳಿತದಲ್ಲಿ ಅವರಿಗೆ ನೆರವಾಗಿದ್ದ ಕೆಲವು ಗಣ್ಯ ಹಾಗೂ ಅವರ ಸಾಮಿಪ್ಯದಲ್ಲಿದ್ದ ಆಯ್ದ ಕುಟುಂಬಗಳಿಗೆ ಬಿಟ್ಟು ಹೋದರು. ಒಂದು ಸ್ವಾರ್ಥ ಕೊಡಗಿನ ಜೀವನ ಶೈಲಿಯನ್ನೇ ಬದಲಿಸಿತು. ರಾಜರು ಕೊಟ್ಟ ಉಂಬಳಿ, ಜಾಗೀರು, ಜಮ್ಮು , ಕೋವಿ ಹಕ್ಕು ಇತ್ಯಾದಿ ಬಿರುದು ಸನ್ನದು , ಸೌಕರ್ಯ ಇಂದಿಗೂ ಪ್ರಜಾ ಸರಕಾರದಲ್ಲಿ ಮಾನ್ಯವಾಗಿದೆ. ಆದರೆ ರಾಜ ಮನೆತನ, ಅವರ ಸೊತ್ತು, ಅವರ ವಾರೀಸುದಾರರ ಬಗ್ಗೆ ಅವರ ವಂಶದ ಬಗ್ಗೆ ಕೊಡಗಿನ ಚರಿತ್ರೆಯಲ್ಲಿ ಹೆಚ್ಚಿನ ಮಾಹಿತಿ ಇಲ್ಲ , ಅಂದಿನ "ಸಿ -ರಾಜ್ಯ" ಕೂರ್ಗ್ ಎಂಬ ವಿಶಿಷ್ಟ ಪರಂಪರೆಯ ಒಂದು ಪರ್ವತ ರಾಜ್ಯ , ಕೇವಲ ಒಂದು ಜಿಲ್ಲೆಯಾಗಿ ಜಿಲ್ಲೆ ಮೈಸೂರು ಸಂಸ್ಥಾನದಲ್ಲಿ ವಿಲೀನವಾಗಲು ಬ್ರಿಟಿಷ್ ಭಾರತದ ಚರಿತ್ರೆಕಾರರು ದಾಖಲಿಸಿದ ಚರಿತ್ರೆ ಎಂಬ ( ಕೂರ್ಗ್ ಗೆಜೆಟಿಯರ್, ಕೊಡಗು ಚರಿತ್ರೆ ) ದಾಖಲಾತಿಯೇ ಕಾರಣ ವಾಯಿತೇ  ಎಂದೆನಿಸುವುದು.

KANNADA CULTURE LANGUAGE & LITERATURE: ಕಲೆ , ಸಂಸ್ಕೃತಿ , ಭಾಷೆ, ಉಡುಪು, ಆರಾಧ್ಯ,  ಸಂಪ್ರದಾಯಗಳಿಗೆ ಇನ್ನೂ ಹೆಚ್ಚಿನ ಮಾನ್ಯತೆಯ ಅಗತ್ಯವಿದೆ. ರಾಜ್ಯ ಸಂಸ್ಕೃತಿ ಮತ್ತು ಪರಂಪರೆಯು ಬಗ್ಗೆ ಕಾರ್ಯೋನ್ಮುಕರಾಗ ಬೇಕಾಗಿದೆ. ಈಗಷ್ಟೇ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜ್ , ಮೆಡಿಕಲ್ ಕಾಲೇಜ್ , ಸುಸಜ್ಜಿತ ವಿಶೇಷ ಸೌಲಭ್ಯದ ಆಸ್ಪ್ರತ್ರೆ, ಮೊದಲಾದ ಕನಿಷ್ಠ ಸೌಲಭ್ಯಗಳು ಬರುತಿದೆ. ಶೇಕಡಾ ೯೦ ಕ್ಕೂ ಹೆಚ್ಚು ವಿದ್ಯಾವಂತರಾಗಿರುವ ಪ್ರದೇಶದ ಯುವಕರು ಉದ್ಯೋಗಕ್ಕಾಗಿ ಪರ ರಾಜ್ಯಗಳನ್ನು ಅವಲಂಬಿಸ ಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.

SCOPE FOR ENTREPRENEUR SHIP : ಮಾಹಿತಿ ತಂತ್ರ ಜ್ಞಾನ , ಸಿದ್ದ ಉಡುಪುಗಳ ತಯಾರಿ , ಬಿಡಿ ಭಾಗಗಳ ತಯಾರಿ, ಹೂವು / ಹಣ್ಣು ಗಳ ಸಂಸ್ಕರಣಾ ಮೊದಲಾದ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ಆಗ್ರ ಸ್ಥಾನದಲ್ಲಿದ್ದು ಜಿಲ್ಲೆಯ ಯುವ ಪೀಳಿಗೆಗೆ ಉದ್ಯೋಗ ಕಲ್ಪಿಸುವ ಯೋಜನೆ ಆಗ ಬೇಕಾಗಿದೆ. ಗ್ರಾಮ ಸಂಕೀರ್ಣಗಳಲ್ಲಿ ಶೈತ್ಯಲೀಕರಣ ಘಟಕ ಹಾಗೂ ಸಂಸ್ಕರಣಾ ಘಟಕಗ ಅಗತ್ಯವಿದೆ. ಪರಿಸರದ ಸಮತೋಲನ ಹಾಗೂ ವಾತಾವರಣ ಸುಧಾರಣೆಗೆ ಹೆಚ್ಚು ಒತ್ತು ಕೊಡುವ ಸರಕಾರ ಯುವ ಸಂಪತ್ತನ್ನು ಬಳಸಿ ಕೊಳ್ಳ ಬೇಕಾಗಿದೆ .

 

 

 


0 Comments:

Post a Comment

Subscribe to Post Comments [Atom]

<< Home