ರತ್ನನ ಕನ್ನಡ ಬರೆಹಗಳು:
ರತ್ನನ ಕನ್ನಡ ಬರೆಹಗಳು:
ಕಳೆದ ಎಂಟು ದಶಕಗಳಿಂದ ಈ ತಾಯ್ನುಡಿಯ ಪದ ವಾಕ್ಯ ಪ್ರಬಂಧಗಳನ್ನು ವಿವಿಧ ರೂಪಗಳಲ್ಲಿ ನೋಡುತ್ತಾ ಬರುವ ಸೌಭಾಗ್ಯ ನನ್ನದಾಯಿತು. ಹುಟ್ಟಿದ್ದು ಮಲೆನಾಡಿನ ಮಡಿಕೇರಿಯ ಸರಕಾರೀ ಆಸ್ಪತ್ರೆಯಲ್ಲಿ. ತಂದೆಯವರು ಭಾರತೀಯ ವಾಯು ಸೇನೆಯಲ್ಲಿ ಎರಡನೇ ಮಹಾಯುದ್ಧದ ಪ್ರಯುಕ್ತ ಕೊಡಗಿನ ವಿದ್ಯಾ ಇಲಾಖೆಯಿಂದ ನಿಯುಕ್ತ ರಾಗಿದ್ದರು (೧೯೪೧-೪೫). ಚೆಂಬು ಸರಕಾರೀ ಶಾಲೆಯ ಪ್ರಥಮ ಏಕ ಉಪಾಧ್ಯಾಯ ಭಾಗ್ಯ ನಮ್ಮ ತಂದೆಯವರದ್ದು. ಆಗ ತಾನೇ ಮಂಗಳೂರಿನ ಸಂತ ಆನ್ಸ್ ಉಪಾಧ್ಯಾಯ ತರಬೇತಿ ಕಾಲೇಜುನಲ್ಲಿ ಎರಡು ವರ್ಷದ ಮಾಧ್ಯಮಿಕ ತರಬೇತಿ ಪಡೆದು ಬಂದಿದ್ದರು ಅಮ್ಮ. ಸಂಪಾಜೆ ಕೀಲಾರು ಬಯಲು ಮಾದೆಪಾಲಿನಲ್ಲಿ ವಾಸ. ನನಗಿಂತ ಐದು ವರುಷ ಹಿರಿಯಕ್ಕ ಮನೆಯಲ್ಲಿ. ಮನೆ ಕೆಲಸಕ್ಕೆ ಮತ್ತು ಇತರ ಹೊರ ಕೆಲಸಗಳಿಗೆ ಚಾಕರಿಗೆ ಜನ ಇದ್ದ ಕಾಲ.ಅಜ್ಜನ ಕಾರುಬಾರು ದರ್ಬಾರು ನಡೆಯುತ್ತಿದ್ದ ಕಾಲವದು. ಅಜ್ಜಿ ಯವರು ನಮ್ಮೊಡನೆ ಇದ್ದರು. ತರಬೇತಿ ವೇಳೆ ಅಮ್ಮ ಕೆಲಸಕ್ಕೆ ಅರ್ಜಿ ಹಾಕಿದ್ದರು, ಸುಳ್ಯದ ಅಡ್ಕಾರು ಅಣ್ಣಪ್ಪ ಎಂಬುವವರು ಜಿಲ್ಲಾ ಬೋರ್ಡ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಹಾಗಾಗಿ ನಡು ಕರಾವಳಿಯ ಬಾರಕೂರಿನಲ್ಲಿ ಜಿಲ್ಲಾ ಬೋರ್ಡ್ ಹೈಸ್ಕೂಲ್ ನಲ್ಲಿ ಹಂಗಾಮಿ ಉಪಾಧ್ಯಾಯ ಕೆಲಸಕ್ಕೆ ಆದೇಶ ಬಂದು ೪೦ ದಿನದ ಮಗು ವಾಗಿದ್ದ ನನ್ನನ್ನು ಕರೆದು ಕೊಂಡು ಸಂಸಾರ ಸಮೇತ ಆರು ನದಿಗಳನ್ನು ದೋಣಿಯಲ್ಲಿ ದಾಟಿ ಬಾರಕೂರಿಗೆ ಪಯಣ. ಅಲ್ಲಿಂದಲೇ ಶುರುವಾಯಿತು ನಮ್ಮ ಇಂಪಾದ ಬನವಾಸಿ ಕದಂಬರ ರಾಜ ಭಾಷೆಯ ಪರಿಚಯ. ಕುಂದ ಕನ್ನಡ , ಹವಿಗನ್ನಡ, ಅರೆ ಗನ್ನಡದಾ ಶಬ್ದ ಭಂಡಾರದ ತೊದಲ್ನುಡಿಗಳು. ಮನೆಯಲ್ಲಿ ಅಕ್ಕನನ್ನು ನೋಡಿಕೊಳ್ಳಲು ಜೋಗಿ ಅಣ್ಣಪ್ಪಣ್ಣ ಇದ್ದರು ಅವರೊಡನೆ ಒಮ್ಮೊಮ್ಮೆ ತುಳುಬಾಶೆ.
ತಾಯಿಯವರ ಹುಟ್ಟೂರು ಭಾಗಮಂಡಲದಲ್ಲಿ ಮಾಧ್ಯಮ ಮಡಿಕೇರಿಯಲ್ಲಿ ಪ್ರೌಢ ಶಿಕ್ಷಣ , ಕಾಲೇಜು( ಪಿ ಯು ಸಿ ) ಓದುವ ವೇಳೆ ಕೊಡವ ತಕ್, ಅರೆ ಬಾಶೆಗಳ ಇನ್ನೂ ಹೆಚ್ಚಿನ ಪರಿಚಯವಾಯಿತು. ಮೂಲ ಕನ್ನಡ ಇನ್ನಷ್ಟು ಬಲ ವಾಯಿತು. ನಮ್ಮ ಪರಂಪರೆ ಸಂಸ್ಕೃತಿ ಗಳ ಮೂಲವನ್ನು ಅಧ್ಯಯನ ಮಾಡತ್ತಾ ಇಂದು ಕನ್ನಡ ನಾಡು ಯದುರಾಜರಾಳಿದ ನಾಡಲಿ ತಳವೂರುವ ಅವಕಾಶ. ನಡೆ ಕನ್ನಡ, ನಗೆ ಕನ್ನಡ, ನುಡಿ ಕನ್ನಡ, ಮನ ಕನ್ನಡ, ಉಸಿರು ಕನ್ನಡ ಸರ್ವಂ ಕನ್ನಡಮಯಂ. ಹಿರೇ ಮಗಳೂರು ಕಣ್ಣನ್ ಮಾಮ ಪ್ರೊ ಕೃಷ್ಣೆ ಗೌಡರ ಮಾತುಗಳನ್ನೂ ಮಿತ್ರ ಸಹಪಾಠಿ ದತ್ತಣ್ಣ ( ದತ್ತಾತ್ರೇಯ )ನ ಸಿನೆಮಾಗಳನ್ನ ನೋಡುತ್ತಾ ಮಿತ್ರ ಚಿದಾನಂದರ ತಾರಿಣಿಯರ ಸಾನ್ನಿಧ್ಯ ವಿನಿಮಯ ಸಂಬಾಷಣೆಗಳ ಅನುಭವದಿ ಕನ್ನಡದ ನಂಟು ವ್ಯಾಮೋಹ ಇನ್ನೂ ಹೆಚ್ಚಾಯಿತು."ಕೆಂಡ ಸಂಪಿಗೆ" "ಪ್ರತಿ ಲಿಪಿ"ಗಳ ಪರಿಚಯವಾಯಿತು. ಬಾಶೆಯ ಆಳದ ಅನುಭವ ವಾಗುತಲಿದೆ. ಸರಳ ಮುಗ್ದ ಗ್ರಾಮೀಣ ಸೊಗಡಿನ ವ್ಯಾಕರಣ ಬದ್ಧ ಶ್ರೀಮಂತ ಭಾಷೆಯಿದು. ಎಷ್ಟು ಸರಳವೂ ಅಷ್ಟೇ ಅರ್ಥ ಗರ್ಭಿತವಾಗಿದೆ ಈ ಭಾಷೆ . ಇಂದಿನ ಆಧುನಿಕ ಸವಲತ್ತು ಅವಲತ್ತು ಗಳನ್ನು ಚೆನ್ನಾಗಿ ಬಳಸಿಕೊಂಡು ನಮ್ಮ ನಾಡ ಕನ್ನಡ ಬಾಶೆ, ನನ್ನ ಅಮ್ಮನೊಡನೆ ಆಡಿದ ಭಾಷೆ ಅನ್ನದ ಬಾಶೆಯಾಗಿ ಈಗ "ಈ -ಕನ್ನಡ" ವಾಗಿದೆ ನಾಡ ಬಾಶೆ. ಕರ್ನಾಟಕದ ರಾಜ್ಯ ನುಡಿ ಕನ್ನಡ ಇಂದು ವಿಶ್ವ ವ್ಯಾಪಿಯಾಗಿದೆ. ಶಾಸ್ತ್ರೀಯ ಸ್ಥಾನ ಮಾನ ಲಭಿಸಿದೆ. ಸಾಂವಿಧಾನಿಕ ಗುರುತಿದೆ. ಚದುರಿ ಹೋಗಿದ್ದ ನಮ್ಮೆಲ್ಲರನ್ನೂ ಒಟ್ಟು ಗೂಡಿಸಿತು ಈ ಮಾತೃ ಬಾಶೆ ಪರಂಪರೆಯ ನಾಡ ನುಡಿ. (ಕೀ ಬಾ ರ /
ReplyReply allForward


0 Comments:
Post a Comment
Subscribe to Post Comments [Atom]
<< Home