ಹೆಚ್ ಜಿ ದತ್ತಾತ್ರೇಯ(ದತ್ತಣ್ಣ)
ROLE OF ENGINEERS in KANNADA CINEMA:
Many Engineers in KARNATAKA ( Few from UVCE) have contributed to Kannada Cine industry.
- ಹೆಚ್ ಜಿ ದತ್ತಾತ್ರೇಯ(ದತ್ತಣ್ಣ) - ಕರುನಾಡ- ಕನ್ನಡ ಚಿತ್ರರಂಗದ ಪ್ರಭುದ್ಧ ಹಿರಿಯ ಚಿತ್ರ ನಟ. U V C E (ಮೈಸೂರು ವಿಶ್ವವಿದ್ಯಾಲಯದ) ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾಗಿ ತನ್ನ ವಿದ್ಯೆ ಹಾಗೂ ಕರ್ತವ್ಯಗಳ ನಡುವೆ ಸಮಯ ಮಾಡಿಕೊಂಡು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮುಖ್ಯ ಮಜಲುಗಳಾದ ನಾಟಕ, ಕಿರುತೆರೆ ಹಾಗೂ ಸಿನೆಮಾಗಳಲ್ಲಿ ಪಾತ್ರವಹಿಸಿ ಅದನ್ನು ಶಿಸ್ತು ಬದ್ದವಾಗಿ ನೆರೆವೇರಿಸುತಿಹ ಜನಾನುರಾಗಿ ಕನ್ನಡಿಗ ನಮ್ಮ ದತ್ತಣ್ಣ.
- ಶ್ರೀ ಹೆಚ್ ಜಿ ದತ್ತಾತ್ರೇಯರವರ ಪ್ರಾಥಮಿಕ ಶಾಲಾ ಪ್ರಾರಂಭ ಮೈಸೂರಿನ ನೂರಡಿ ರಸ್ತೆಯ ಕೆ ಆರ್ ಮೊಹಲ್ಲಾದಲ್ಲಿರುವ "ಸರಕಾರೀ ಬಾಲಕರ ಕಿರಿಯ ಪ್ರಾಥಮಿಕ ಶಾಲೆ"ಯಲ್ಲಿ. ನಂತರ ೧೯೫೯ ರ ವರೆಗೆ ಚಿತ್ರದುರ್ಗ ಮಾಧ್ಯಮಿಕ ಮತ್ತು ಪ್ರೌಢ ಸರಕಾರೀ ಶಾಲೆ , ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಕೆ . ಚಿಕ್ಕಂದಿನಿಂದಲೂ ಹೊಸ ಪ್ರಯೋಗಗಲ್ಲಿ ಆಸಕ್ತಿ. ಸೂಕ್ಷ್ಮಗ್ರಾಹಿ . ಚಿತ್ರದುರ್ಗದ ಐತಿಹಾಸಿಕ ಮದಕರಿ ನಾಯಕರ ಕೋಟೆಯಲ್ಲಿ ತಾಲೀಮು, ತಂದೆ ಹರಿಹರ ಗುಂಡೂರಾವರವರು ವಕೀಲರಾಗಿದ್ದು ಚಿತ್ರದುರ್ಗದಲ್ಲಿ ತಿಲಕ ಸಂಘದ ಸ್ಥಾಪಕರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಕುಟುಂಬ. ತುಂಬು ಸಂಸಾರದ ಆಶೀರ್ವಚನ .ಹಿರಿಯ ಅಣ್ಣಂದಿರಾದ ಶ್ರೀ ವೆಂಕಟೇಶ್, ಸೂರ್ಯನಾರಾಯಣ, ಸೋಮಶೇಖರರವರ ಮಾರ್ಗ ದರ್ಶನ. ಸೋದರ ಕೃಷ್ಣಾ, ಸೋದರಿ ಲಕ್ಷ್ಮಿ- ಗಿರಿಜ ರೊಡನಾಟ. ಹಾಲಿ ಶ್ರೀನಗರದ ಅಣ್ಣ ಸೋಮಣ್ಣ ನವರ ಮನೆಯಲ್ಲಿ ವಾಸ.
- ಚಿಕ್ಕಂದಿನಿಂದಲೂ ನಾಟಕದಲ್ಲಿ ಆಸಕ್ತಿ, ೧೯೫೮ರ ಎಸ ಎಸ ಎಲ್ ಸಿ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೆ ಪ್ರಥಮ. ೧೯೫೯ರಲ್ಲಿ ರಾಜ್ಯದಲ್ಲಿ ಪಿ ಯು ಸಿ ಪರೀಕ್ಷೆ ಯಲ್ಲಿ ದ್ವಿತೀಯ. ೧೯೫೯-೬೪ ರಾಜ್ಯದ ಪ್ರಥಮ ಎಂಬ ಹಿರಿಮೆಯ ಸರಕಾರೀ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಎಲೆಕ್ಟ್ರಿಕಲ್ ಇಂಜಿನಿಯರಿಂಗ್" ವ್ಯಾಸಂಗ. ನಾಟಕ , ಭಾಷಣ , ಆಟೋಟಗಳಲ್ಲಿ ಭಾಗ ವಹಿಸುತ್ತಿದ್ದ ಚುರುಕಿನ ಆದರ್ಶ ವಿದ್ಯಾರ್ಥಿ. ಕಾಲೇಜಿನ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದು ನಮ್ಮ ಸಹಪಾಠಿಯಾಗಿದ್ದರು. ಎಲ್ಲ ವರ್ಗದವರೊಡನೆ ಮಿಳಿತವಾಗುತ್ತಿದ್ದ ಸಹೃದಯಿ. ಈ ಅವಿರತ ಸಾಧಕರಿಗೆ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಕನ್ನಡ ಚಿತ್ರ ಪ್ರಪಂಚದ ಹೆಮ್ಮೆಯ ಈ ನಟ, ಕಲಾ ಪ್ರಪಂಚದ ಅನರ್ಘ್ಯ ರತ್ನ- ಶ್ರೀ ಹರಿಹರಗುಂಡೂರಾವ್ ದತ್ತಾತ್ರೇಯರಿಗೆ ಭಾರತದ ಸಿನಿ ಶೋತೃರು ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡಲಿ ಎಂಬ ಆಶಯ.
- ಸುಮಾರು ೨೦ ವರ್ಷಗಳ ಕಾಲ ಭಾರತೀಯ ವಾಯುಪಡೆಯ ಸಿಗ್ನಲ್ಸ್ ಶಾಖೆಯಲ್ಲಿ ಕಮೀಷನ್ಡ್ ಹುದ್ದೆಯಲ್ಲಿ ಸೇವೆ ಮಾಡಿ ವಿಂಗ್ ಕಮ್ಯಾಂಡರ್ ಆಗಿ ನಿವೃತ್ತಿಯಾದ ಸುಯೋಗ . ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪನಿಯ ಸ್ಟಾಫ್ ಟ್ರೇನಿಂಗ ಕಾಲೇಜು ನಲ್ಲಿ ಪ್ರಾಂಶುಪಾಲರಾಗಿ ಐದು ವರ್ಷಗಳ ಕಾಲ ಸೇವೆ. ದೆಹಲಿಯಲ್ಲಿ ಸೇವೆ ಸಲ್ಲಿಸುವ ಸಮಯ ಕನ್ನಡ ಭಾರತಿ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಬಿ ವಿ ಕಾರಂತರ ನಾನೇ ಬಿಜ್ಜಳ ನಾಟಕದಲ್ಲಿನ ಬಿಜ್ಜಳನ ಪಾತ್ರ ಎಲ್ಲರೂ ಇವರನ್ನು ಗುರುತಿಸುವಂತೆ ಮಾಡಿತು. ನಂತರ ಕನ್ನಡದ ಆಸ್ಫೋಟ ಸಿನೆಮಾ ದಲ್ಲಿ "ಎಂ ಎಲ್ ಎ" ಆಗಿ ಖಳ ನಾಯಕನ ಪಾತ್ರ ಇವರ ನಟನೆಗೆ ಒಂದು ಹೊಸ ತಿರುವು ನೀಡಿತು. ನಂತರ "ಶರ ವೇಗದ ಸರದಾರ" ಮೊದಲಾದ ಸಿನೆಮಾಗಳಲ್ಲಿ ನಟಿಸುತ್ತ ಎಲ್ಲಾ ರೀತಿಯ ಪಾತ್ರಗಳನ್ನು ವಹಿಸಿದರು. ಪಾತ್ರದಲ್ಲಿ ತಲ್ಲೀನರಾಗಿ ಪಾತ್ರಕ್ಕೆ ಹೊಸ ಜೀವ ತುಂಬಿದರು. ಶುಭವಾಗಲಿ ನಮ್ಮ ದತ್ತಣ್ಣ ನಟಿಸಿದ, ನಟಿಸುತ್ತಲಿರುವ ಎಲ್ಲ ಕನ್ನಡ ಮತ್ತು ಹಿಂದಿ ಸಿನೆಮಾಗಳಿಗೆ. ಪ್ರತಿಯೊಂದು ಸಿನೆಮಾದ ಪಾತ್ರದಲ್ಲಿ ಅವರ ನಟನೆ ಮಾತು ಸಂಭಾಷಣೆಯಲ್ಲಿ ಪಾತ್ರಗಳಲ್ಲಿ ಜೀವಂತಿಕೆಯನ್ನು ತುಂಬಿ ತನ್ನದೇ ಆದ ಒಂದು ಮೆರಗನ್ನು ನೀಡುವುದು ಇವರ ಹುಟ್ಟಿನಿಂದ ಬಂದ ಕಲೆ ಎಂದರೆ ಅತಿಶಯೋಕ್ತಿ ಆಗಲಾರದು. ನಮ್ಮ ನಾಡ ಹೆಸರಾಂತ ಚಿತ್ರ ನಿರ್ಮಾಪಕರು, ಚಿತ್ರ ನಿರ್ದೇಶಕರು ದತ್ತಣ್ಣನವರ ಪಾತ್ರದ ಮೂಲಕ ಪ್ರತಿ ಚಿತ್ರದಲ್ಲಿ ಒಂದು ವಿಶೇಷ ಸಂದೇಶವನ್ನು ಸಮಾಜಕ್ಕೆ ನೀಡುತ್ತ ಬಂದಿರುವುದು ಸಿನೆ ಶೋತೃಗಳು ಗಮನಿಸ ಬೇಕಾದ ವಿಶೇಷತೆ.


4 Comments:
ಖಂಡಿತಾ ಹೌದು....ಪ್ರಶಂಸೆ ಮತ್ತು awards ಅವರದಾಗಿದ್ದರೂ ಸಾಧಾರಣ ಮನುಷ್ಯರಂತೆ ಇರುವವರು ದತ್ತಣ್ಣ ಮಾತ್ರ....ಕರ್ನಾಟಕದ ಹೆಮ್ಮೆಯ ಕೂಡ...
ಇವರು ತುಂಬಿದ ಕೊಡ. ಯಾವತ್ತೂ ಪ್ರಶಂಸೆ ಬಿರುದುಗಳನ್ನು ಬಯಸಿದವರಲ್ಲ. ಸದಾ ಇತರರಿಗೆ ಸಹಾಯಕ ಮಾರ್ಗದರ್ಶನ ನೀಡಲು ಸದಾ ಸಿದ್ದ. ಅರುಂಧತಿ ನಾಗ್,ಶೃತಿ ನಾಯ್ಡು, ಶೇಷಾದ್ರಿ ಮೊದಲಾದವರು ಸಿನೇಮಾ ದಿಗ್ಗಜರು ಅವರ ಕೃತಿಗಳ ಬಗ್ಗೆ ಇವರೊಡನೆ ಚರ್ಚಿಸುವರು.
2023: ಮಿತ್ರ ಜನರಲ್ ನೀಲಕಂಠಪ್ಪ, ಶ್ರೀಮತಿ ಶೋಭಾ ಮತ್ತು ದತ್ತಾತ್ರೇಯ ರೊಡನೆ ಭೋಜನ ಹಾಗೂ ಉಭಯ ಕುಶಲೋಪರಿ. ಮಧುರ ಕ್ಷಣಗಳು ಬದುಕಲು ಹೊಸ ಹುರುಪು ನೀಡಿತು.
ದತ್ತಣ್ಣ ನಿಗೆ ಹೊಸ ವರುಷ 2026:ರ ಶುಭಾಶಯಗಳು
Post a Comment
Subscribe to Post Comments [Atom]
<< Home