Tuesday, 14 June 2022

Beauty of mother land-Kodagu

ಕಾಫಿತೋಟದ ಕಂಪು  ಕೊಡಗಿನ ಪವಿತ್ರ ಕಾವೇರಿಯ ಮಡಿಲಲಿ. 
ಸವಿರುಚಿಯ   ನೈಸರ್ಗಿಕ ಫಿಲ್ಟರ್ ಕಾಫಿಯ ಸವಿಯುತ.
ಬೆಚ್ಚಗಿನ ಚಾದರ ಹೊದಿಕೆಯಲಿ ತಣ್ಣನೆ ಗಾಳಿಯ ಆಸ್ವಾದಿಸುತಲಿ.
ಮುಂಜಾನೆ ಮಂಜಿನಲಿ ಕಣ್ಮನ ತಂಪು ಸವಿಯೋಣ ಬನ್ನಿ  ಪರವಶವಾಗಿದೆ ಮನವು ತಂಗಾಳಿಯ ಸ್ಪರ್ಶದಿ.
ಕಾಫಿಯ ಕಂಪಲಿ ಪ್ರತಿ ಕ್ಷಣದಿ  ಹೂವ ಸುವಾಸನೆಯ ಆಗ್ರಣಿಸುತಲಿ.ತೋಟ ಸುಂದರ ನೋಟ ಮನೋಹರ ಮನ ಬಯಸಿದೆ ಈ ಕ್ಷಣ ನಿರಂತರ. 
ಮೊಗ್ಗಿನ ಜಡೆಯಂತೆ ಹೆಣೆದಿದೆ ಪೂರ್ವ ಪಶ್ಚಿಮ ದಕ್ಷಿಣೋತ್ತರ ದಶ ದಿಕ್ಕುಗಳಲಿ.
ಕಣ್ಮನ ತಂಪಾಗಿಸುತ  ಮನವ ಮುದಗೊಳಿಸಿದೆ ತಾಯಿನಾಡ ಸ್ನಿಗ್ಧ ಸೌಂದರ್ಯ.ನಿಸರ್ಗದಾ ಮಧುರ ಭಾಂದವ್ಯ. ಪ್ರಕೃತಿ ಮಡಿಲಲಿ ಮತ್ತೊಮ್ಮೆ ಮಗುವಾಗಿ ಬಾಲ್ಯದ ಬೆಳದಿಂಗಳಲಿ ಮತ್ತೊಮ್ಮೆ ನಡೆದಾಡುವಾಶೆ.

1 Comments:

At 9 January 2026 at 08:15 , Blogger RATANS said...

New year 2026 of hopes has started bringing coastal District of Karnataka closer to Hill Town Kodagu

 

Post a Comment

Subscribe to Post Comments [Atom]

<< Home