ಕರುಳ ಋಣ - ಮಡಿಲ ಕಾರುಣ್ಯ
ಕರುಳ ಋಣ - ಮಡಿಲ ಕಾರುಣ್ಯ
ವಾನಪ್ರಸ್ಥದ ಅಂಚಿನಲ್ಲಿ ನಿಂತಿಹ ನಮಗೆ ಇಂದು ಅದರ ಅನುಭವ ವಾಗುತಿದೆ. .
ಎಂಟು ದಶಕಗಳು ಕಳೆಯುತ್ತಾ ಬಂದರೂ ವಾಸ್ತವತೆಯ ಒಪ್ಪಲಾರದ ಒಳ ಮನಸ್ಸು
ಹೆತ್ತವರ ನಂಬಿದ ಆಪ್ತರ ಕಳೆದು ನಗರದಲ್ಲಿ ದೂರದಿ ಅಣು ಕುಟುಂಬ ಜೀವಿಸುತ್ತಿರುವ ಎಮಗೆ.
ಸಾಂಕ್ರಾಮಿಕ ವೈರಾಣುವಿನ ವಿವಿಧ ರೂಪಾಂತರಗಳು ಧರ್ಮ ಪರೀಕ್ಷೆಗೆ ಈಡು ಮಾಡಿತು.
ಅತ್ತ ಋಣದ ರಿಣ ಊರಿನೆಡೆಗೆ ಸೆಳೆಯಿತು ಸಪ್ತ ಸಾಗರ ದಾಟಿ ಮೋಹದ ಮಾಯೆಯಲಿ
ಯಾವುದು ಋಣ ಯಾವುದು ಈ ರಿಣ ಎಂಬುದನ್ನು ಪ್ರಶ್ನಿಸುತ್ತಿದೆ ಈ ಮಾಯಾ ಲೋಕ.
ಡಿಸೆಂಬರ್ ೨೦೨೨ ಹೊಸ ಅನುಭವದ ಹೊಸ ಸಂಬಂದದ ಪರಿಚಯಿಸಿತು
ಆಪ್ತರನ್ನು ಕಳೆದು ಕೊಳ್ಳುತ್ತಾ ಹೊಸಬರನ್ನು ಒಳ ಮಾಡಿಕೊಳ್ಳುತ್ತ ರಿಣದ ಕೊಂಡಿಯ ಹೊಸ ರೂಪ.
ನವ ಯುಗದ ನವೋಲ್ಲಾಸದ ಸಾಂಸ್ಕೃತಿಕ ಪರಂಪರೆಯ ಅಮರ ಕೀರ್ತಿಯ ನಾಡಲಿ ಸ್ವಾಗತಿಸುತ
ವಿಜ್ಞಾನ ಆವಿಷ್ಕಾರ ಇಂಧನಗಳ ರೂಪಾಂತರ ಸದ್ಬಳಕೆಯಾ ಕ್ರೋಡೀಕರಣದಲಿ
ಸಾಮಾನ್ಯ ಜನರ ಜನ ಜೀವನ ಕ್ರಮ ಸುಧಾರಣೆ ಯಾಗುತ್ತಿದೆ ಹೊಸತನದಿ
ಸಂಪನ್ಮೂಲ ಅಭಿವೃದ್ಧಿ ಅಗತ್ಯತೆ ಗಳ ನಡುವಿನ ಅಂತರವ ಕಡಿಮೆ ಮಾಡುತ್ತಾ ಸದ್ಬಳಕೆಯಲಿ.
ಹೆತ್ತವರು ಸಾಕಿದವರು ರೂಪಿಸಿದವರು ತಿದ್ದಿ ತೀಡಿದ ಗುರುಗಳು ಆಪ್ತರು ಸ್ನೇಹಿತರ ನಡುವಿನಲ್ಲಿ
ಶೈಶವ ದಿಂದ ಯೌವನ ಪ್ರೌಢ ಗೃಹಸ್ಥಾಶ್ರಮ ವಾನಪ್ರಸ್ಥದ ವರೆಗಿನ ಏರು ಪೇರುಗಳ ಈ ಪಯಣದಿ
ದಿನಚರಿಯ ಪುನರ್ ಅವಲೋಕಿಸುತಲಿ ಸವಿ ನೆನಪುಗಳ ಮೆಲುಕು ಹಾಕುತ್ತಾ ಬಾಳಿನಂಚಿನಲಿ
ಕೊನೆಯ ಅಧ್ಯಾಯವ ಹೊಸ ಚಿಂತನೆಯಲಿ ಋಣದ ರಿಣದ ಖಾತೆಯನ್ನು ಅವಲೋಕಿಸುತಲಿ
ಕೀ ಬಾ ರ


0 Comments:
Post a Comment
Subscribe to Post Comments [Atom]
<< Home