Sunday, 13 February 2022

RESOURCES MOBILISATION

 ಸಂಪನ್ಮೂಲ :

ಚಿಂತನಶಕ್ತಿ ಹೆಚ್ಚತ ರಾಜಕೀಯ ಪ್ರಜ್ಞಾ ಮೂಡುತಿದೆ .
ಭಾರತ ಶಾಂತಿಯುತ ಸೌಹಾರ್ದ ಜೀವನ ಬಯಸುತ್ತಿದೆ .
ಶಾಸನ ಸಭೆ, ಲೋಕ ಸಭೆಯ ತಯಾರಿಯಲ್ಲಿದೆ ಸಂಘಟಿತ ಶಕ್ತಿಗಳು.
ರೈತ ಶಕ್ತಿ , ಸ್ತ್ರೀ ಶಕ್ತಿ, ಯುವ ಶಕ್ತಿ , ಧರ್ಮದ ಪ್ರಾಮುಖ್ಯತೆಯಲಿ .
ಸಂಪನ್ಮೂಲಗಳ ಕ್ರೋಡೀಕರಣ ವ್ಯವಸ್ಥಿತ ಸದ್ಬಳಕೆಯಲಿ.
ಕೌಶಲ್ಯಾಭಿವೃದ್ಧಿ, ಸ್ವತಂತ್ರ ಸ್ವಾವಲಂಬನೆಯತ್ತ ನೋಡುತಲಿ .
ಗ್ರಾಮೀಣ ಸಂಘಟಿತ ಯುವಪೀಳಿಗೆ ಮುಂದಡಿಯಿಡುತ ಹೊಸತನದಿ
ಯೋಗ ಶಿಕ್ಷಣ, ಆರೋಗ್ಯ, ಸಾಮಾಜಿಕ ಜ್ಞಾನದ ಅರಿವಿನಲಿ .
ಉಳುವವಗೆ ಭೂಮಿಯ ಹಕ್ಕು, ಭೂಸುದಾರಣ ಕಾನೂನು,
ನಲಿ ಕಲಿ ಉಚಿತ ವಿದ್ಯಾದಾನ ಸಮಗ್ರ ಸಾಕ್ಷರತೆಯಲಿ .
ತಾಂತ್ರಿಕತೆ ಜಾಗತೀಕರಣದಲಿ ರಾಷ್ಟ್ರಗಳು ಒಟ್ಟುಗೂಡುತಿವೆ
ಅಂತರ್ಜಾಲದಿ, ಹೊಸ ಭರವಸೆಯ ಬೆಳಕ ಸೃಷ್ಟಿಯಲಿ .
ಜೀವನ ಕ್ರಮದ ಸುಧಾರಣೆಗೆ ತಂತ್ರ ಜ್ಞಾನವ ಬಳಸುತಲಿ
ಸೂರ್ಯ ಶಕ್ತಿ , ಸುಧಾರಿತ ನೀರಿನ ಶುದ್ದೀಕರಣ ಬಳಕೆಯಲಿ
ಸಾಕ್ಷರತೆಯ ಉಳುಮೆ ತರಲಿದೆ ಹೊಸ ಜಗತ್ತಿನಲಿ ಬದಲಾವಣೆ .
ಮನುಕುಲ ಹುಡುಕುತಿದೆ ಹೊಸ ಗ್ರಹದ ಅನ್ವೇಷಣೆಯಲ್ಲಿ

0 Comments:

Post a Comment

Subscribe to Post Comments [Atom]

<< Home